ಮುಖಪುಟ
ಆಹಾರ ಹಾಗು ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರ ಇಲಾಖೆಯ ಎಲ್ಲಾ ಮಾದರಿಯ ಪಡಿತರ ಚೀಟಿದಾರರಿಗೆ ಕ್ಯೂ ಆರ್ ಕೋಡ್ ತಂತ್ರಾಂಶವಿರುವ ಡಿಜಿಟಲ್ ಏಕರೂಪದ ಗುರುತಿನ ಕಾರ್ಡ್ ನೀಡಿ ಆರ್ಥಿಕ ಕ್ಷೇತ್ರದಲ್ಲಿ ಜೀವನ ಮಟ್ಟ ಸುಧಾರಿಸಲು ನೆರವಾಗುವ ಉದ್ದೇಶ ಈ ಯೋಜನೆಯದಾಗಿರುತ್ತದೆ ಜೊತೆಗೆ ಅತಿವೃಷ್ಟಿ ಅನಾವೃಷ್ಟಿ ತುರ್ತು ಪರಿಸ್ಥಿತಿ ಸಮಯದಲ್ಲಿ ಮೂಲ ಭೂತ ಸೌಕರ್ಯಗಳನ್ನು ಹಾಗು ನೆರವನ್ನು ಎಲ್ಲಾ ಮಾದರಿಯ ಪಡಿತರ ಚೀಟಿದಾರರು ಸುಲಭವಾಗಿ ಸುರಕ್ಷತೆಯಿಂದ ಪಡೆಯುಲು ತಪಶೀಲು ಯೋಜನೆ ಗುರುತಿನ ಕಾರ್ಡ್ ನೆರವಾಗುತ್ತದೆ.
ತಪಶೀಲು ಯೋಜನೆ ಗುರುತಿನ ಕಾರ್ಡ್ ಮಾಹಿತಿ ತಂತ್ರಜ್ಜಾನದ ಆದರದ ಮೇಲೆ ಕಾರ್ಯನಿರ್ವಹಿಸುವುದರಿಂದ ಹೆಚ್ಚು ಸುರಕ್ಷತೆಯನ್ನು ಹೊಂದಿದ್ದು ಸುರಕ್ಷಿತ ಕಾರ್ಡ್ ಇದಾಗಿರುತ್ತದೆ, ಪಡಿತರ ಚೀಟಿದಾರರ ಮುಖ್ಯಸ್ಥರ ಭಾವಚಿತ್ರ ಅವರ ಹೆಸರು, ಅವರ ಪಡಿತರ ಚೀಟಿ ಮಾದರಿ, ನ್ಯಾಯ ಬೆಲೆ ಅಂಗಡಿ ಹೆಸರು ಜೊತೆಗೆ ನ್ಯಾಯ ಬೆಲೆ ಅಂಗಡಿ ಸಂಖ್ಯೆಯನ್ನು ಹೊಂದಿರುತ್ತದೆ, ಹಾಗು ಪಡಿತರ ಚೀಟಿದಾರರ ಆಧರ್ ಸಂಖ್ಯೆಯನ್ನು ಹೊಂದಿರುತ್ತದೆ, ಪಡಿತರ ಚೀಟಿ ಸಂಖ್ಯೆ ಬಾರ್ ಕೋಡ್‌ರೂಪದಲ್ಲಿರುವುದರಿಂದ ಸುರಕ್ಷತೆಯ ಪ್ರತೀಕವಾಗಿರುತ್ತದೆ, ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿದರೆ ತಪಶೀಲು ಯೋಜನೆಯ ಸೇವೆಗಳು ಲಭ್ಯವಾಗುತ್ತದೆ, ತಪಶೀಲು ಯೋಜನೆ ಗುರುತಿನ ಕಾರ್ಡ್‌ಮೂಲಕ ನಿಗದಿತ ಸಮಯದಲ್ಲಿ ಪಡಿತರ ಚೀಟಿದಾರರು ಸೇವೆಗಳನ್ನು ಪಡೆಯಬಹುದಾಗಿರುತ್ತದೆ, ನೊಂದಾಯಿತ ಮೊಬೈಲ್ ಸಂಪರ್ಕ ಸಂಖ್ಯೆಯ ಮೂಲಕವು ಸೇವೆಗಳನ್ನು ಪಡೆಯಬಹುದಾಗಿರುತ್ತದೆ, ಮಾಹಿತಿ ತಂತ್ರಜ್ಜಾನದ ಮಾದರಿಯಲ್ಲಿ ಈ ಗುರುತಿನ ಕಾರ್ಡ್ ರೂಪಿಸಿರುವುದರಿಂದ ಸೇವೆಗಳು ಪಡೆಯಲು ವಿಳಂಬವಾಗುವುದಿಲ್ಲ
ತಪಶೀಲು ಯೋಜನೆಯ ಸೇವೆಗಳು
ತಪಶೀಲು ಯೋಜನೆ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ, ವಿಶೇಷವಾಗಿ ಎಲ್ಲಾ ಮಾದರಿಯ ಪಡಿತರ ಚೀಟಿ ಹೊಂದಿರುವವರಿಗೆ, ಹಣಕಾಸು ಸಂಸ್ಥೆಗಳ ಒಡಂಬಡಿಕೆಯಿಂದ ನೇರ ಹಣಕಾಸು ನೆರವನ್ನು ಒದಗಿಸುವ ಹಾಗೂ ಅತಿವೃಷ್ಟಿ ಮತ್ತು ಅನಾವೃಷ್ಟಿ ಸಮಯದಲ್ಲಿ ಸಹಾಯ ಮಾಡುವುದು ಇದರ ಮುಖ್ಯ ಉದ್ದೇಶವಾಗಿದೆ.
- ಪಡಿತರ ಚೀಟಿದಾರರಿಗೆ 150ಕ್ಕಿಂತ ಹೆಚ್ಚು ಹಣಕಾಸು ಸಂಸ್ಥೆಗಳ ಜೊತೆಗೂಡಿ ಆರ್ಥಿಕ ಬೆಂಬಲ ಒದಗಿಸುವುದು
- ಅವಶ್ಯಕ ಅಗತ್ಯಗಳ ಖರೀದಿಗೆ ಸಹಾಯ ಮಾಡುವುದು
- ಪಡಿತರ ಚೀಟಿದಾರರ ಮಕ್ಕಳಿಗೆ ವಿದ್ಯಭ್ಯಾಸ ಹಾಗೂ ಉದ್ಯೋಗಕ್ಕೆ ಸಂಬಂಧಿಸಿದ ನೆರವು ನೀಡುವುದು
- ಅತಿವೃಷ್ಟಿ ಹಾಗೂ ಅನಾವೃಷ್ಟಿ ಸಮಯದಲ್ಲಿ ನೆರವನ್ನು ಒದಗಿಸುವುದು
- ಹಾನಿಗೊಳಗಾದವರು ದಿನಚರಿ ಜೀವನಕ್ಕೆ ಮರಳುವಂತೆ ಪ್ರೇರಣೆ ನೀಡುವುದು
- ಅತಿವೃಷ್ಟಿ ಹಾಗೂ ಅನಾವೃಷ್ಟಿ ಅನುಭವಿಸಿದ ಕುಟುಂಬಗಳಿಗೆ ತುರ್ತು ನೆರವು ಮತ್ತು ಆರ್ಥಿಕ ಸಹಾಯ ಒದಗಿಸುವುದು
- ಉಚಿತ ಅಥವಾ ಕಡಿಮೆ ದರದ ಆಹಾರ ಧಾನ್ಯಗಳ ಪೂರೈಕೆ
- ಆರೋಗ್ಯ ಶಿಬಿರಗಳು / ವೈದ್ಯಕೀಯ ನೆರವು
- ತಾತ್ಕಾಲಿಕ ವಸತಿ / ಕುಡಿಯುವ ನೀರಿನ ವ್ಯವಸ್ಥೆ
- ಸೇವೆಗಳನ್ನು ಪಡೆಯಲು ಯಾವುದೇ ಕಾಲಮಿತಿ ಇರುವುದಿಲ್ಲ
ಪಡಿತರ ಚೀಟಿದಾರರಿಗೆ ಆಗುವ ಅನುಕೂಲತೆಗಳು
- ಆರ್ಥಿಕ ಸ್ವಾವಲಂಬನೆ: ಸಾಲ ಪಡೆದು ಮುದ್ದಾತಿಗೆ ಹಿಂತಿರುಗಿಸುವ ಅವಕಾಶವು ಫಲಾನುಭವಿಗಳನ್ನು ಸಹಾಯಧನದ ಅವಲಂಬನೆಗೆ ಬದಲಾಗಿ ಆತ್ಮನಿರ್ಭರತೆಯತ್ತ ಕರೆದೊಯ್ಯುತ್ತದೆ.
- ಉದ್ಯಮಾರಂಭಕ್ಕೆ ಸಹಾಯ: ಸಣ್ಣ ವ್ಯಾಪಾರ, ಕೈಗಾರಿಕೆ ಅಥವಾ ಮನೆಮದ್ದಲಿನ ಉದ್ಯಮ ಆರಂಭಿಸಲು ಆರಂಭಿಕ ಬಂಡವಾಳ ದೊರೆಯುತ್ತದೆ.
- ಅವಶ್ಯಕ ವೆಚ್ಚ ಪೂರೈಕೆ: ವೈದ್ಯಕೀಯ ಖರ್ಚು, ಮಕ್ಕಳ ಶಿಕ್ಷಣ ಅಥವಾ ಮನೆ ಬಳಕೆ ಸಾಮಗ್ರಿ ಖರೀದಿಗೆ ತಾತ್ಕಾಲಿಕ ಹಣಕಾಸು ಸಹಾಯವಾಗಿ ಬಳಸಬಹುದು.
- ಬ್ಯಾಂಕ್ ಅಥವಾ ಹಣಕಾಸು ವ್ಯವಸ್ಥೆಯೊಂದಿಗೆ ಸಂಬಂಧ ಬೆಳೆಸುವುದು: ಲೋನ್ ಪ್ರಕ್ರಿಯೆಯ ಮೂಲಕ ಫಲಾನುಭವಿಗಳು ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಸೇರಿಕೊಂಡು ಹಣಕಾಸಿನ ಶಿಸ್ತಿಗೆ ಒಳಪಡುವ ಸಾಧ್ಯತೆ ಹೆಚ್ಚು.
- ಹುಡಕಿ ಪಡೆದ ಹಣಕ್ಕಿಂತ ಕಡಿಮೆ ಬಡ್ಡಿದರ: ಸರ್ಕಾರಿ ಯೋಜನೆಯಡಿ ನೀಡಲಾಗುವ ಸಾಲಗಳು ಸಾಮಾನ್ಯವಾಗಿ ಕಡಿಮೆ ಬಡ್ಡಿದರ ಹೊಂದಿದ್ದು, ದುರ್ಬಲ ವರ್ಗಗಳಿಗೆ ಅನುಕೂಲಕಾರಿಯಾಗಿವೆ.
- ಪುನಃ ಸಾಲ ಪಡೆಯಲು ಜವಾಬ್ದಾರಿತ್ವದ ಮಾರ್ಗ: ಸರಿಯಾದವಾಗಿ ಸಾಲ ತಿರುಗಿಸಿ ಪಾವತಿಸುವ ಮೂಲಕ ಅವರು ಇನ್ನು ಮುಂದೆ ಹೆಚ್ಚಿನ ಮೊತ್ತದ ನೆರವು ಅಥವಾ ಸಾಲ ಪಡೆಯಲು ಅರ್ಹರಾಗುತ್ತಾರೆ.
- ಮಹಿಳಾ ಸಬಲೀಕರಣ: ಮಹಿಳಾ ಪಡಿತರ ಚೀಟಿದಾರರಿಗೆ ಗೃಹೋದ್ಯೋಗದ ಸಾಲ ನೀಡುವುದರಿಂದ ಕುಟುಂಬದ ಆರ್ಥಿಕ ನಿರ್ವಹಣೆಯಲ್ಲಿ ಮಹಿಳೆಯರ ಪಾತ್ರ ಬಲವಾಗುತ್ತದೆ.
ಆನ್ ಲೈನ್ ಅರ್ಜಿ
- ತಪಶೀಲು ಅರ್ಜಿ ಸಲ್ಲಿಸಲು ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರ ಇಲಾಖೆವತಿಯಿಂದ ನೀಡುವ ಪಡಿತರ ಚೀಟಿಯನ್ನು ಕಡ್ಡಾಯವಾಗಿ ಹೊಂದಿರಬೇಕು
- ಎಲ್ಲಾ ಮಾದರಿಯ ಪಡಿತರ ಚೀಟಿದಾರರು ಅರ್ಹತೆ ಪಡೆದಿರುತ್ತಾರೆ
- ಸೇವೆಗಳನ್ನು ಪಡೆಯಲು ಯಾವುದೇ ಕಾಲಮಿತಿ ಇರುವುದಿಲ್ಲ
- ಪಡಿತರ ಚೀಟಿಯಲ್ಲಿರುವ ಎಲ್ಲಾ ಸದಸ್ಯರು ಸೇವೆಗಳನ್ನು ಪಡೆಯಲು ಅರ್ಹರಾಗಿರುತ್ತಾರೆ ಅರ್ಜಿ ಸಲ್ಲಿಸಿ
ಸಂಪರ್ಕ ಮಾಹಿತಿ
Director Office:
Level 5, Green Boulevard, New Delhi, Noida-201301
Website: www.tapashiluyojane.in
ಕರ್ನಾಟಕ ಕಾರ್ಯಾಲಯ:
ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ, ಮೊದಲನೇ ಮಹಡಿ, ಶಿವಮೊಗ್ಗ - 577222
Email: tapashiiluyojaneadm@gmail.com