ತಪಶೀಲು ಯೋಜನೆ Tapashilu Scheme

ನಮ್ಮ ಹಕ್ಕು • ಸುಲಭ ಪ್ರವೇಶ • ಸಮಾಜ ಸೇವೆ Our Right • Easy Access • Social Service

ಸ್ವಾಗತ ತಪಶೀಲು ಯೋಜನೆಗೆ Welcome to Tapashilu Scheme

ತಪಶೀಲು ಯೋಜನೆ ಮಾಹಿತಿ
ನಿಮ್ಮ ಹಸ್ತ-ದಲ್ಲೇ
Tapashilu Scheme Info
Right in Your Hand

ಸಾಮಾಜಿಕ ನ್ಯಾಯದತ್ತ ಮತ್ತೊಂದು ಹೆಜ್ಜೆ, ಎಲ್ಲರಿಗೂ ಸಮಾನ ಅವಕಾಶ ಮತ್ತು ವಾರವಾರ್ಷಿಕ ಸೇವೆಗಳು. Another step towards social justice, equal opportunity for all, and annual welfare services.

Tapasheelu Service Centre
Tapashilu Comic 1
Tapashilu Comic 2
Tapashilu Comic 3
Tapashilu Comic 4
Tapashilu Comic 5
Tapashilu Comic 1
Tapashilu Comic 2
Tapashilu Comic 3
Tapashilu Comic 4
Tapashilu Comic 5

ಎಲ್ಲಾ ಮಾದರಿಯ ಪಡಿತರ ಚೀಟಿದಾರರಿಗೆ ಕ್ಯೂಆರ್ ಕೋಡ್ ಆಧಾರಿತ ಡಿಜಿಟಲ್ ಏಕರೂಪದ ಗುರುತಿನ ಕಾರ್ಡ್ ನೀಡುವ ಉದ್ದೇಶದಿಂದ “ತಪಶೀಲು ಯೋಜನೆ” ರೂಪಿಸಲಾಗಿದೆ. ಈ ಗುರುತಿನ ಕಾರ್ಡ್ ಮೂಲಕ ಪಡಿತರ ಚೀಟಿದಾರರು ವಿವಿಧ ಸರ್ಕಾರಿ ಸೇವೆಗಳು ಮತ್ತು ಆರ್ಥಿಕ ನೆರವುಗಳನ್ನು ಸುಲಭವಾಗಿ ಪಡೆಯುವಂತಾಗುತ್ತದೆ ಹಾಗೂ ಅವರ ಜೀವನಮಟ್ಟ ಸುಧಾರಿಸಲು ಸಹಕಾರಿಯಾಗುತ್ತದೆ. ಇದಲ್ಲದೆ, ಅತಿವೃಷ್ಟಿ, ಅನಾವೃಷ್ಟಿ ಮತ್ತು ಇತರ ತುರ್ತು ಪರಿಸ್ಥಿತಿಗಳ ಸಂದರ್ಭದಲ್ಲಿ ಅಗತ್ಯವಿರುವ ಮೂಲಭೂತ ಸೌಲಭ್ಯಗಳು ಮತ್ತು ಸರ್ಕಾರದ ನೆರವು ಪಡಿತರ ಚೀಟಿದಾರರಿಗೆ ವೇಗವಾಗಿ ಮತ್ತು ಸುರಕ್ಷಿತವಾಗಿ ತಲುಪುವಂತೆ ಮಾಡುವಲ್ಲಿ ಈ ತಪಶೀಲು ಯೋಜನೆಯ ಡಿಜಿಟಲ್ ಗುರುತಿನ ಕಾರ್ಡ್ ಪ್ರಮುಖ ಪಾತ್ರವಹಿಸುತ್ತದೆ.

ತಪಶೀಲು ಯೋಜನೆಯ ಪ್ರಮುಖ ಉದ್ದೇಶವು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ, ವಿಶೇಷವಾಗಿ ಎಲ್ಲಾ ಮಾದರಿಯ ಪಡಿತರ ಚೀಟಿ ಹೊಂದಿರುವವರಿಗೆ ಅಗತ್ಯವಾದ ಹಣಕಾಸು ಮತ್ತು ಸಾಮಾಜಿಕ ನೆರವನ್ನು ಒದಗಿಸುವುದಾಗಿದೆ. ಈ ಯೋಜನೆಯಡಿ ಹಣಕಾಸು ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು ಅರ್ಹ ಪಡಿತರ ಚೀಟಿದಾರರಿಗೆ ನೇರ ಹಣಕಾಸು ನೆರವು ಮತ್ತು ವಿವಿಧ ಸೌಲಭ್ಯಗಳನ್ನು ಒದಗಿಸುವ ವ್ಯವಸ್ಥೆ ರೂಪಿಸಲಾಗುತ್ತದೆ ಮತ್ತು ಅತಿವೃಷ್ಟಿ, ಅನಾವೃಷ್ಟಿ ಹಾಗೂ ಇತರ ತುರ್ತು ಪರಿಸ್ಥಿತಿಗಳ ಸಂದರ್ಭದಲ್ಲಿ ಅಗತ್ಯವಿರುವ ನೆರವು ಮತ್ತು ಮೂಲಭೂತ ಸೌಲಭ್ಯಗಳನ್ನು ಪಡಿತರ ಚೀಟಿದಾರರಿಗೆ ವೇಗವಾಗಿ ಹಾಗೂ ಪರಿಣಾಮಕಾರಿಯಾಗಿ ತಲುಪಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ.

The "Tapashilu Scheme" has been formulated with the aim of providing a QR-code-based digital uniform identification card to all types of ration cardholders. Through this ID card, ration cardholders can easily access various government services and financial assistance, helping to improve their standard of living. Additionally, in times of heavy rain, drought, and other emergencies, this digital ID card of the Tapashilu Scheme plays a key role in ensuring that essential infrastructure and government aid reach ration cardholders quickly and securely.

The primary objective of the Tapashilu Scheme is to provide necessary financial and social assistance to economically backward families, especially all types of ration cardholders. Under this scheme, agreements will be made with financial institutions to establish a system providing direct financial assistance and various benefits to eligible ration cardholders, and to quickly and effectively deliver aid and basic infrastructure in times of heavy rain, drought, and other emergencies.

ನಮ್ಮ ಬಗ್ಗೆ (About US) About Us

ಪ್ರಸ್ತುತ ಸಮಾಜದಲ್ಲಿ ಅನೇಕ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳು, ವಿಶೇಷವಾಗಿ ಪಡಿತರ ಚೀಟಿ ಹೊಂದಿರುವವರು, ಸರ್ಕಾರದ ವಿವಿಧ ಯೋಜನೆಗಳು ಮತ್ತು ಹಣಕಾಸು ನೆರವುಗಳನ್ನು ಸರಿಯಾದ ಸಮಯದಲ್ಲಿ ಪಡೆಯಲು ಹಲವು ಅಡಚಣೆಗಳನ್ನು ಎದುರಿಸುತ್ತಿದ್ದಾರೆ. ಮಾಹಿತಿ ಕೊರತೆ, ವ್ಯವಸ್ಥಿತ ಗುರುತಿನ ಅಭಾವ ಮತ್ತು ಸೇವೆಗಳ ವಿಳಂಬದಂತಹ ಸಮಸ್ಯೆಗಳು ಇದಕ್ಕೆ ಪ್ರಮುಖ ಕಾರಣವಾಗಿವೆ.

ಡಿಜಿಟಲ್ ತಂತ್ರಜ್ಞಾನ ಅಭಿವೃದ್ಧಿಯ ಈ ಕಾಲದಲ್ಲಿ ಸಾರ್ವಜನಿಕ ಸೇವೆಗಳನ್ನು ಸರಳ ಮತ್ತು ಪಾರದರ್ಶಕವಾಗಿ ಜನರಿಗೆ ತಲುಪಿಸುವ ಅಗತ್ಯ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿಯೇ ಪಡಿತರ ಚೀಟಿದಾರರಿಗೆ ಕ್ಯೂಆರ್ ಕೋಡ್ ಆಧಾರಿತ ಡಿಜಿಟಲ್ ಗುರುತಿನ ಕಾರ್ಡ್ ನೀಡುವ ಮೂಲಕ ಸರ್ಕಾರಿ ಯೋಜನೆಗಳು ಮತ್ತು ಹಣಕಾಸು ನೆರವುಗಳನ್ನು ಸುಲಭವಾಗಿ ಹಾಗೂ ವೇಗವಾಗಿ ತಲುಪಿಸುವ ವ್ಯವಸ್ಥೆ ಅಗತ್ಯವಾಗಿದೆ.

ಇದಲ್ಲದೆ, ಅತಿವೃಷ್ಟಿ, ಅನಾವೃಷ್ಟಿ ಮತ್ತು ಇತರ ತುರ್ತು ಪರಿಸ್ಥಿತಿಗಳ ಸಂದರ್ಭದಲ್ಲಿ ಪಡಿತರ ಚೀಟಿದಾರರಿಗೆ ಅಗತ್ಯವಿರುವ ನೆರವು ಮತ್ತು ಮೂಲಭೂತ ಸೌಲಭ್ಯಗಳನ್ನು ತಕ್ಷಣ ತಲುಪಿಸಲು ಡಿಜಿಟಲ್ ಗುರುತಿನ ವ್ಯವಸ್ಥೆ ಅತ್ಯಂತ ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ತಪಶೀಲು ಯೋಜನೆ ಸಮಾಜದ ದುರ್ಬಲ ವರ್ಗಗಳ ಅಭಿವೃದ್ಧಿಗೆ ಮತ್ತು ಅವರ ಜೀವನಮಟ್ಟವನ್ನು ಸುಧಾರಿಸಲು ಪ್ರಮುಖ ಪಾತ್ರವಹಿಸುತ್ತದೆ.

In today's society, many economically backward families, especially ration cardholders, face several hurdles in receiving various government schemes and financial assistance in a timely manner. Lack of information, absence of systematic identification, and service delays are the primary reasons for this.

In this era of digital technology development, there is an increasing need to deliver public services to people simply and transparently. In this context, it is necessary to have a system that makes it easy and fast to deliver government schemes and financial assistance by providing QR-code-based digital identification cards to ration cardholders.

Furthermore, in situations like heavy rains, drought, and other emergencies, a digital identification system is highly essential to immediately deliver necessary aid and basic amenities to ration cardholders. In this regard, the Tapashilu Scheme plays a critical role in the development of weaker sections of society and improving their standard of living.

ತಪಶೀಲು ಯೋಜನೆ Vision (ದೂರದೃಷ್ಟಿ) Tapashilu Scheme Vision

ಡಿಜಿಟಲ್ ತಂತ್ರಜ್ಞಾನವನ್ನು ಬಳಸಿಕೊಂಡು ಎಲ್ಲಾ ಮಾದರಿಯ ಪಡಿತರ ಚೀಟಿದಾರರಿಗೆ ಸುರಕ್ಷಿತ ಮತ್ತು ಏಕರೂಪದ ಡಿಜಿಟಲ್ ಗುರುತಿನ ವ್ಯವಸ್ಥೆಯನ್ನು ಒದಗಿಸುವುದು ಹಾಗೂ ಸರ್ಕಾರಿ ಸೇವೆಗಳು ಮತ್ತು ಸೌಲಭ್ಯಗಳನ್ನು ಸುಲಭವಾಗಿ ಮತ್ತು ವೇಗವಾಗಿ ತಲುಪಿಸುವ ಮೂಲಕ ಸಮಾಜದ ದುರ್ಬಲ ವರ್ಗಗಳ ಜೀವನಮಟ್ಟವನ್ನು ಸುಧಾರಿಸುವುದು ಈ ಯೋಜನೆಯ ದೂರದೃಷ್ಟಿಯಾಗಿದೆ.

To provide a secure and uniform digital identification system to all types of ration cardholders using digital technology, and to improve the standard of living of the weaker sections of society by delivering government services and benefits easily and quickly.

ತಪಶೀಲು ಯೋಜನೆ Mission (ಮಿಷನ್) Tapashilu Scheme Mission

  • 1️⃣ ಪಡಿತರ ಚೀಟಿದಾರರಿಗೆ ಕ್ಯೂಆರ್ ಕೋಡ್ ಆಧಾರಿತ ಡಿಜಿಟಲ್ ಗುರುತಿನ ಕಾರ್ಡ್ ನೀಡುವುದು.
  • 2️⃣ ವಿವಿಧ ಸರ್ಕಾರಿ ಇಲಾಖೆಗಳ ಸೇವೆಗಳನ್ನು ಒಂದೇ ಡಿಜಿಟಲ್ ವ್ಯವಸ್ಥೆಯಲ್ಲಿ ಸಂಪರ್ಕಿಸುವುದು.
  • 3️⃣ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಹಣಕಾಸು ಮತ್ತು ಸಾಮಾಜಿಕ ನೆರವು ದೊರೆಯುವಂತೆ ವ್ಯವಸ್ಥೆ ರೂಪಿಸುವುದು.
  • 4️⃣ ಡಿಜಿಟಲ್ ತಂತ್ರಜ್ಞಾನ ಬಳಸಿ ಸರ್ಕಾರಿ ಸೇವೆಗಳ ವಿತರಣೆ ವ್ಯವಸ್ಥೆಯನ್ನು ಸುಧಾರಿಸುವುದು.
  • 5️⃣ ಪ್ರಕೃತಿ ವಿಕೋಪಗಳು ಮತ್ತು ತುರ್ತು ಪರಿಸ್ಥಿತಿಗಳ ಸಮಯದಲ್ಲಿ ಫಲಾನುಭವಿಗಳಿಗೆ ತ್ವರಿತ ನೆರವು ಒದಗಿಸುವ ವ್ಯವಸ್ಥೆ ನಿರ್ಮಿಸುವುದು.
  • 1️⃣ Providing QR-code-based digital identification cards to ration cardholders.
  • 2️⃣ Connecting services of various government departments in a single digital system.
  • 3️⃣ Formulating a system to ensure financial and social assistance reaches economically backward families.
  • 4️⃣ Improving the delivery system of government services using digital technology.
  • 5️⃣ Building a system to provide rapid assistance to beneficiaries during natural disasters and emergencies.

ತಪಶೀಲು ಯೋಜನೆ ದೀರ್ಘಕಾಲೀನ ಪರಿಣಾಮ (Long Term Impact) Tapashilu Scheme Long Term Impact

ತಪಶೀಲು ಯೋಜನೆಯ ಅನುಷ್ಠಾನದ ಮೂಲಕ ಮುಂದಿನ ವರ್ಷಗಳಲ್ಲಿ ಸಮಾಜ ಮತ್ತು ಆಡಳಿತ ವ್ಯವಸ್ಥೆಯಲ್ಲಿ ಹಲವು ಸಕಾರಾತ್ಮಕ ಬದಲಾವಣೆಗಳನ್ನು ನಿರೀಕ್ಷಿಸಲಾಗುತ್ತದೆ.

Through the implementation of the Tapashilu Scheme, several positive changes are expected in society and the administrative system in the coming years.

1
ಡಿಜಿಟಲ್ ಗುರುತಿನ ವ್ಯವಸ್ಥೆಯ ವಿಸ್ತರಣೆ Expansion of Digital Identity System

ಈ ಯೋಜನೆಯ ಮೂಲಕ ಪಡಿತರ ಚೀಟಿದಾರರಿಗೆ ಡಿಜಿಟಲ್ ಗುರುತಿನ ವ್ಯವಸ್ಥೆ ರೂಪುಗೊಳ್ಳುತ್ತದೆ. ಭವಿಷ್ಯದಲ್ಲಿ ಈ ವ್ಯವಸ್ಥೆಯನ್ನು ಇನ್ನಷ್ಟು ಅಭಿವೃದ್ಧಿಪಡಿಸಿ ವಿವಿಧ ಸರ್ಕಾರಿ ಸೇವೆಗಳೊಂದಿಗೆ ಸಂಪರ್ಕಿಸುವ ಸಾಧ್ಯತೆ ಇರುತ್ತದೆ.

A digital identity system for ration cardholders is established through this scheme. In the future, this system can be developed further to connect with various government services.

2
ಆರ್ಥಿಕವಾಗಿ ಹಿಂದುಳಿದ ವರ್ಗಗಳ ಅಭಿವೃದ್ಧಿ Development of Backward Sections

ಹಣಕಾಸು ನೆರವು ಮತ್ತು ವಿವಿಧ ಸೇವೆಗಳ ಲಭ್ಯತೆಯಿಂದ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳು ಸ್ವಾವಲಂಬಿ ಜೀವನ ನಡೆಸಲು ಸಾಧ್ಯವಾಗುತ್ತದೆ.

With the availability of financial aid and various services, economically backward families can lead self-reliant lives.

3
ಡಿಜಿಟಲ್ ಆಡಳಿತ ವ್ಯವಸ್ಥೆ ಬಲಪಡಿಸುವುದು Strengthening Digital Governance

ಡಿಜಿಟಲ್ ಕಾರ್ಡ್ ಮತ್ತು ಕ್ಯೂಆರ್ ಕೋಡ್ ವ್ಯವಸ್ಥೆಯಿಂದ ಸರ್ಕಾರದ ಸೇವೆಗಳು ಪಾರದರ್ಶಕವಾಗಿ ಮತ್ತು ವೇಗವಾಗಿ ಜನರಿಗೆ ತಲುಪುತ್ತವೆ. ಇದರಿಂದ ಡಿಜಿಟಲ್ ಆಡಳಿತ ವ್ಯವಸ್ಥೆ ಮತ್ತಷ್ಟು ಬಲವಾಗುತ್ತದೆ.

The digital card and QR code system will ensure that government services reach people transparently and quickly, further strengthening the digital governance system.

4
ತುರ್ತು ಪರಿಸ್ಥಿತಿಗಳಲ್ಲಿ ವೇಗವಾದ ಸಹಾಯ Rapid Emergency Assistance

ಅತಿವೃಷ್ಟಿ, ಅನಾವೃಷ್ಟಿ ಮತ್ತು ಇತರೆ ಪ್ರಕೃತಿ ವಿಕೋಪಗಳ ಸಮಯದಲ್ಲಿ ಫಲಾನುಭವಿಗಳನ್ನು ತ್ವರಿತವಾಗಿ ಗುರುತಿಸಿ ಅವರಿಗೆ ಅಗತ್ಯ ನೆರವು ಒದಗಿಸಲು ಸಾಧ್ಯವಾಗುತ್ತದೆ.

During heavy rains, drought, and other natural disasters, it will be possible to quickly identify beneficiaries and provide them with necessary aid.

5
ಸಮಾಜದ ಸಮಗ್ರ ಅಭಿವೃದ್ಧಿ Comprehensive Social Development

ಈ ಯೋಜನೆಯ ಮೂಲಕ ದುರ್ಬಲ ವರ್ಗಗಳಿಗೆ ನೆರವು ದೊರೆಯುವುದರಿಂದ ಅವರ ಜೀವನಮಟ್ಟ ಸುಧಾರಿಸಿ ಸಮಾಜದ ಸಮಗ್ರ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ.

Delivering assistance to weaker sections through this scheme will improve their standard of living and support the overall development of society.

6
ತಂತ್ರಜ್ಞಾನ ಆಧಾರಿತ ಸೇವೆಗಳ ಬೆಳವಣಿಗೆ Growth of Tech-Based Services

ಡಿಜಿಟಲ್ ಕಾರ್ಡ್ ಮತ್ತು ವೆಬ್ ಪೋರ್ಟಲ್ ವ್ಯವಸ್ಥೆಯಿಂದ ಭವಿಷ್ಯದಲ್ಲಿ ಇನ್ನಷ್ಟು ಡಿಜಿಟಲ್ ಸೇವೆಗಳನ್ನು ಈ ಯೋಜನೆಯೊಂದಿಗೆ ಸಂಪರ್ಕಿಸಲು ಸಾಧ್ಯವಾಗುತ್ತದೆ.

The digital card and web portal system will make it possible to connect more digital services to this scheme in the future.

ಸೇವೆಗಳು Services

ತಪಶೀಲು ಯೋಜನೆಯಡಿ ಪಡಿತರ ಚೀಟಿದಾರರಿಗೆ ವಿವಿಧ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಆರೋಗ್ಯ ಮತ್ತು ತುರ್ತು ನೆರವು ಸೇವೆಗಳನ್ನು ನೀಡಲಾಗುತ್ತದೆ. ಕೆಳಗಿನ ಮುಖ್ಯ ಮಾಹಿತಿ ಕ್ಲಿಕ್ ಮಾಡಿ ಅವುಗಳ ವಿವರಗಳನ್ನು ವೀಕ್ಷಿಸಿ.

Under the Tapashilu Scheme, comprehensive social, financial, educational, health, and emergency services are provided to ration cardholders. Click on the headers below to view details.

ತಪಶೀಲು ಯೋಜನೆಯ ಪ್ರಮುಖ ಲಾಭಪಡೆಯುವವರು ಆರ್ಥಿಕವಾಗಿ ಹಿಂದುಳಿದ ಮತ್ತು ಸಾಮಾಜಿಕವಾಗಿ ಮಧ್ಯಮ ವರ್ಗದ ಕುಟುಂಬಗಳು ವಿವಿಧ ಮಾದರಿಯ ಪಡಿತರ ಚೀಟಿ ಹೊಂದಿರುವ ನಾಗರಿಕರಾಗಿರುತ್ತಾರೆ. ಈ ಯೋಜನೆಯ ಮೂಲಕ ಅವರಿಗೆ ಡಿಜಿಟಲ್ ಗುರುತಿನ ವ್ಯವಸ್ಥೆ, ಹಣಕಾಸು ನೆರವು ಮತ್ತು ವಿವಿಧ ಸರ್ಕಾರಿ ಸೇವೆಗಳನ್ನು ಸುಲಭವಾಗಿ ಪಡೆಯುವ ಅವಕಾಶ ದೊರೆಯುತ್ತದೆ.

ಈ ಯೋಜನೆಯಿಂದ ಲಾಭ ಪಡೆಯುವ ಪ್ರಮುಖ ವರ್ಗಗಳು:
  • ವಿವಿಧ ಮಾದರಿಯ ಪಡಿತರ ಚೀಟಿ ಹೊಂದಿರುವ ಕುಟುಂಬಗಳು.
  • ಆರ್ಥಿಕವಾಗಿ ಹಿಂದುಳಿದ ಮತ್ತು ಸಾಮಾಜಿಕವಾಗಿ ದುರ್ಬಲ ವರ್ಗದ ನಾಗರಿಕರು.
  • ಗ್ರಾಮೀಣ ಮತ್ತು ನಗರ ಪ್ರದೇಶಗಳ ಬಡ ಹಾಗೂ ಮಧ್ಯಮ ವರ್ಗದ ಜನರು.
  • ಅತಿವೃಷ್ಟಿ, ಅನಾವೃಷ್ಟಿ ಮತ್ತು ಇತರ ತುರ್ತು ಪರಿಸ್ಥಿತಿಗಳಲ್ಲಿ ನೆರವು ಅಗತ್ಯವಿರುವ ಕುಟುಂಬಗಳು.
  • ಸರ್ಕಾರಿ ಯೋಜನೆಗಳು ಮತ್ತು ಹಣಕಾಸು ಸೇವೆಗಳನ್ನು ಪಡೆಯಲು ಸೌಲಭ್ಯ ಬೇಕಿರುವ ಪಡಿತರ ಚೀಟಿದಾರರು.

ಈ ಯೋಜನೆಯ ಮೂಲಕ ಮೇಲ್ಕಂಡ ವರ್ಗದ ಜನರಿಗೆ ಸರ್ಕಾರಿ ಸೇವೆಗಳು, ಹಣಕಾಸು ನೆರವು ಮತ್ತು ತುರ್ತು ಪರಿಸ್ಥಿತಿಗಳಲ್ಲಿ ಅಗತ್ಯವಾದ ಸಹಾಯವನ್ನು ವೇಗವಾಗಿ ಮತ್ತು ಪರಿಣಾಮಕಾರಿಯಾಗಿ ತಲುಪಿಸುವುದು ಸಾಧ್ಯವಾಗುತ್ತದೆ.

The primary beneficiaries of the Tapashilu Scheme are citizens belonging to economically backward and socially middle-class families holding various types of ration cards. Through this scheme, they obtain digital identity systems, financial assistance, and easy access to various government services.

Key categories benefiting from this scheme:
  • Families holding various types of ration cards.
  • Economically backward and socially vulnerable citizens.
  • Poor and middle-class people in rural and urban areas.
  • Families needing aid during heavy rains, drought, and other emergencies.
  • Ration cardholders requiring support to access government schemes and financial services.

Through this scheme, it is possible to quickly and effectively deliver government services, financial aid, and emergency assistance to the above categories of people.

ತಪಶೀಲು ಯೋಜನೆಯಡಿ ಪಡಿತರ ಚೀಟಿದಾರರಿಗೆ ವಿವಿಧ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಮತ್ತು ತುರ್ತು ಪರಿಸ್ಥಿತಿಗಳಿಗೆ ಸಂಬಂಧಿಸಿದ ಸಮಗ್ರ ಸೇವೆಗಳು ಒದಗಿಸಲಾಗುತ್ತವೆ. ಈ ಯೋಜನೆಯ ಮುಖ್ಯ ಉದ್ದೇಶ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಸಮರ್ಪಕ ಬೆಂಬಲ ಒದಗಿಸಿ ಅವರ ಜೀವನಮಟ್ಟವನ್ನು ಸುಧಾರಿಸುವುದಾಗಿದೆ. ಜೊತೆಗೆ ಶಿಕ್ಷಣ, ಉದ್ಯೋಗ, ಆರೋಗ್ಯ ಮತ್ತು ಸಾಮಾಜಿಕ ಭದ್ರತೆ ಕ್ಷೇತ್ರಗಳಲ್ಲಿ ಸಹಾಯ ಒದಗಿಸುವ ಮೂಲಕ ಸಮಗ್ರ ಅಭಿವೃದ್ಧಿಯನ್ನು ಸಾಧಿಸುವುದು ಈ ಯೋಜನೆಯ ಪ್ರಮುಖ ಗುರಿಯಾಗಿದೆ. ಈ ಯೋಜನೆಯಡಿ ಕೆಳಕಂಡ ಪ್ರಮುಖ ಸೇವೆಗಳು ಒದಗಿಸಲಾಗುತ್ತವೆ.

Under the Tapashilu Scheme, comprehensive social, financial, educational, and emergency services are provided to ration cardholders. The main objective is to improve the standard of living of economically backward families by providing adequate support. The key services provided are:

ತಪಶೀಲು ಯೋಜನೆಯಡಿ ಪಡಿತರ ಚೀಟಿದಾರರಿಗೆ ಆರ್ಥಿಕ ಬೆಂಬಲ ನೀಡುವ ಉದ್ದೇಶದಿಂದ 150ಕ್ಕಿಂತ ಹೆಚ್ಚು ಮಾನ್ಯತೆ ಪಡೆದ ಹಣಕಾಸು ಸಂಸ್ಥೆಗಳು ಮತ್ತು ಬ್ಯಾಂಕುಗಳೊಂದಿಗೆ ಸಹಕಾರ ವ್ಯವಸ್ಥೆ ರೂಪಿಸಲಾಗುತ್ತದೆ. ಈ ವ್ಯವಸ್ಥೆಯ ಮೂಲಕ ಫಲಾನುಭವಿಗಳಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯಗಳು ಹಾಗೂ ಆರ್ಥಿಕ ನೆರವು ಒದಗಿಸಲಾಗುತ್ತದೆ. ಇದರ ಮೂಲಕ ಕುಟುಂಬಗಳು ತಮ್ಮ ಆರ್ಥಿಕ ಅಗತ್ಯಗಳನ್ನು ಪೂರೈಸಲು ಮತ್ತು ಸ್ವಾವಲಂಬಿ ಜೀವನ ನಡೆಸಲು ಸಹಾಯವಾಗುತ್ತದೆ.

Under this scheme, a cooperation system is established with over 150 recognized financial institutions and banks to provide financial support. Low-interest loans and financial assistance are provided to help families meet their financial requirements and live independently.

ಕುಟುಂಬಗಳಿಗೆ ಅಗತ್ಯವಾದ ದಿನನಿತ್ಯ ಬಳಕೆಯ ವಸ್ತುಗಳು, ಶಿಕ್ಷಣಕ್ಕೆ ಬೇಕಾದ ಸಾಮಗ್ರಿಗಳು ಮತ್ತು ಇತರ ಅಗತ್ಯಗಳಿಗಾಗಿ ಹಣಕಾಸು ಸಹಾಯ ಹಾಗೂ ಮಾರ್ಗದರ್ಶನ ಒದಗಿಸಲಾಗುತ್ತದೆ. ಇದರಿಂದ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಮೂಲಭೂತ ಅಗತ್ಯಗಳನ್ನು ಪೂರೈಸಲು ಸಹಾಯಕವಾಗುತ್ತದೆ.

Financial help and guidance are provided for household daily necessities, educational materials, and other requirements. This supports backward families in fulfilling their basic needs.

ಯೋಜನೆಯಡಿ ಪಡಿತರ ಚೀಟಿದಾರರ ಮಕ್ಕಳಿಗೆ ಶಿಕ್ಷಣ ಕ್ಷೇತ್ರದಲ್ಲಿ ಸಹಾಯ ಮತ್ತು ಮಾರ್ಗದರ್ಶನ ನೀಡಲಾಗುತ್ತದೆ. ಶಾಲೆ ಮತ್ತು ಕಾಲೇಜು ಶಿಕ್ಷಣಕ್ಕೆ ಅಗತ್ಯವಾದ ಮಾಹಿತಿ, ವಿದ್ಯಾರ್ಥಿವೇತನ ಯೋಜನೆಗಳ ಕುರಿತು ಮಾರ್ಗದರ್ಶನ ಹಾಗೂ ಉನ್ನತ ಶಿಕ್ಷಣಕ್ಕೆ ಅಗತ್ಯವಾದ ಸಲಹೆಗಳು ಒದಗಿಸಲಾಗುತ್ತದೆ. ಇದರಿಂದ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣಾವಕಾಶಗಳನ್ನು ಪಡೆಯಲು ಸಹಾಯವಾಗುತ್ತದೆ.

Under this scheme, children of ration cardholders receive assistance and guidance in education. Information on school and college admissions, scholarships, and higher education options are provided to help them get better opportunities.

ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳು, ನೋಟ್ ಪುಸ್ತಕಗಳು, ಸ್ಟೇಷನರಿ ವಸ್ತುಗಳು ಮತ್ತು ಇತರ ಅಧ್ಯಯನ ಸಾಮಗ್ರಿಗಳನ್ನು ಕಡಿಮೆ ದರದಲ್ಲಿ ಅಥವಾ ಸಹಾಯಧನದ ಮೂಲಕ ಒದಗಿಸುವ ವ್ಯವಸ್ಥೆಯನ್ನು ಈ ಯೋಜನೆಯಡಿ ರೂಪಿಸಲಾಗುತ್ತದೆ. ಇದರಿಂದ ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಹಿಂದುಳಿಯದೆ ಮುಂದುವರಿಯಲು ಸಹಾಯವಾಗುತ್ತದೆ.

A system is set up to provide textbooks, notebooks, stationery, and other study supplies at subsidized rates. This ensures that students do not face obstacles in their education.

ಯೋಜನೆಯಡಿ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧಾತ್ಮಕ ಮತ್ತು ಪ್ರವೇಶ ಪರೀಕ್ಷೆಗಳಿಗೆ ತಯಾರಾಗಲು ಆನ್ಲೈನ್ ಮೂಲಕ ಗುಣಮಟ್ಟದ ತರಬೇತಿ ನೀಡಲಾಗುತ್ತದೆ. CET, NEET, UPSC, KPSC, ಬ್ಯಾಂಕಿಂಗ್ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದ ತರಬೇತಿ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಗ್ರಾಮೀಣ ಮತ್ತು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶನ ದೊರೆಯುತ್ತದೆ.

Quality online coaching is provided for entrance and competitive exams such as CET, NEET, UPSC, KPSC, banking, etc., guiding rural and underprivileged students towards successful careers.

ಯುವಕರಿಗೆ ಉದ್ಯೋಗಾವಕಾಶಗಳನ್ನು ಹೆಚ್ಚಿಸಲು ವಿವಿಧ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಸ್ವಯಂ ಉದ್ಯೋಗ ಆರಂಭಿಸಲು ಅಗತ್ಯವಾದ ತರಬೇತಿ, ಉದ್ಯಮ ಮಾರ್ಗದರ್ಶನ ಮತ್ತು ವೃತ್ತಿಪರ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವ ಕಾರ್ಯಕ್ರಮಗಳನ್ನು ಕೂಡ ಈ ಯೋಜನೆಯಡಿ ಒಳಗೊಂಡಿರುತ್ತದೆ.

Various skill development training programs are organized to boost job opportunities for youth. Training to start self-employment, business guidance, and professional skill building are covered.

ಅತಿವೃಷ್ಟಿ, ಅನಾವೃಷ್ಟಿ ಮತ್ತು ಇತರ ಪ್ರಕೃತಿ ವಿಕೋಪಗಳ ಸಂದರ್ಭಗಳಲ್ಲಿ ಪೀಡಿತ ಕುಟುಂಬಗಳಿಗೆ ತುರ್ತು ನೆರವು ಮತ್ತು ಆರ್ಥಿಕ ಸಹಾಯ ಒದಗಿಸಲಾಗುತ್ತದೆ. ಇದರಿಂದ ಪೀಡಿತ ಕುಟುಂಬಗಳು ತುರ್ತು ಪರಿಸ್ಥಿತಿಯನ್ನು ಎದುರಿಸಲು ಸಹಾಯವಾಗುತ್ತದೆ.

Emergency response and financial help are given to affected families during heavy rains, drought, and other natural disasters, supporting them during critical times.

ಪ್ರಕೃತಿ ವಿಕೋಪಗಳಿಂದ ಹಾನಿಗೊಳಗಾದ ಕುಟುಂಬಗಳು ತಮ್ಮ ಸಾಮಾನ್ಯ ಜೀವನಕ್ಕೆ ಮರಳಲು ಅಗತ್ಯವಾದ ಸಹಾಯ, ಮಾರ್ಗದರ್ಶನ ಮತ್ತು ಪ್ರೇರಣೆ ಒದಗಿಸಲಾಗುತ್ತದೆ. ಇದರಿಂದ ಅವರ ಜೀವನದಲ್ಲಿ ಸ್ಥಿರತೆ ಬರಲು ಸಹಕಾರಿಯಾಗುತ್ತದೆ.

Necessary assistance, rehabilitation guidance, and encouragement are provided to families affected by disasters to help them recover and return to normal life.

ಸಮಾಜದ ದುರ್ಬಲ ವರ್ಗಗಳ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಆರೋಗ್ಯ ಶಿಬಿರಗಳು, ವೈದ್ಯಕೀಯ ಸಲಹೆಗಳು ಮತ್ತು ಅಗತ್ಯವಿರುವ ಸಂದರ್ಭಗಳಲ್ಲಿ ವೈದ್ಯಕೀಯ ನೆರವು ಒದಗಿಸಲಾಗುತ್ತದೆ. ಇದರಿಂದ ಮೂಲಭೂತ ಆರೋಗ್ಯ ಸೇವೆಗಳು ಸುಲಭವಾಗಿ ಲಭ್ಯವಾಗುತ್ತವೆ.

With a focus on the health of weaker sections, regular health camps, medical consultations, and necessary medical aid are provided to make basic healthcare accessible.

ಪ್ರಕೃತಿ ವಿಕೋಪಗಳಿಂದ ಪೀಡಿತ ಕುಟುಂಬಗಳಿಗೆ ತಾತ್ಕಾಲಿಕ ವಸತಿ, ಕುಡಿಯುವ ನೀರು ಮತ್ತು ಇತರ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ವ್ಯವಸ್ಥೆಯನ್ನು ಕೂಡ ಯೋಜನೆಯಡಿ ರೂಪಿಸಲಾಗುತ್ತದೆ.

Provision of temporary shelter, clean drinking water, and other basic utilities is arranged for families displaced or hit by natural disasters.

ತಪಶೀಲು ಡಿಜಿಟಲ್ ಏಕೀಕೃತ ಗುರುತಿನ ಕಾರ್ಡ್ ಯೋಜನೆಯಡಿ ಪಡಿತರ ಚೀಟಿದಾರರಿಗೆ ಮೂಲಭೂತ ಮತ್ತು ತುರ್ತು ಆರೋಗ್ಯ ಸೇವೆಗಳನ್ನು ಸುಲಭವಾಗಿ, ವೇಗವಾಗಿ ಹಾಗೂ ಪಾರದರ್ಶಕವಾಗಿ ತಲುಪಿಸುವ ಉದ್ದೇಶ ಹೊಂದಲಾಗಿದೆ. ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಸಮಯೋಚಿತ ಆರೋಗ್ಯ ಸೇವೆ ದೊರೆಯುವಂತೆ ಡಿಜಿಟಲ್ ವ್ಯವಸ್ಥೆಯ ಮೂಲಕ ವಿವಿಧ ಆರೋಗ್ಯ ಸೌಲಭ್ಯಗಳನ್ನು ಒದಗಿಸುವ ಯೋಜನೆ ಇದಾಗಿದೆ.

The QR-code-based digital unified ID card aims to deliver basic and emergency health services transparently and quickly to ration cardholders. This digital system ensures timely health access for backward families:

ಯೋಜನೆಯಡಿ ನೀಡಲಾಗುವ QR Code ಆಧಾರಿತ ಡಿಜಿಟಲ್ ಕಾರ್ಡ್ ಮೂಲಕ ಫಲಾನುಭವಿಗಳ ಮೂಲ ಆರೋಗ್ಯ ಮಾಹಿತಿಯನ್ನು ಸುರಕ್ಷಿತವಾಗಿ ಸಂಗ್ರಹಿಸಲು ಸಾಧ್ಯವಾಗುತ್ತದೆ. ಇದರ ಮೂಲಕ:

The QR Code card stores basic medical data of the beneficiary securely, enabling:

  • ರೋಗಿಯ ಮೂಲ ಮಾಹಿತಿ ತಕ್ಷಣ ಲಭ್ಯ
  • ತುರ್ತು ಪರಿಸ್ಥಿತಿಯಲ್ಲಿ ವೇಗವಾದ ಚಿಕಿತ್ಸೆ
  • ವೈದ್ಯಕೀಯ ದಾಖಲೆಗಳ ಡಿಜಿಟಲ್ ನಿರ್ವಹಣೆ
  • ಆಸ್ಪತ್ರೆಗಳಲ್ಲಿ ಸಮಯ ಉಳಿವು
  • Immediate availability of basic patient history
  • Faster treatment during medical emergencies
  • Digital management of health records
  • Time savings at hospitals and clinics

ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ನಿಯಮಿತ ಆರೋಗ್ಯ ಶಿಬಿರಗಳನ್ನು ಆಯೋಜಿಸಬಹುದು. ಶಿಬಿರಗಳಲ್ಲಿ:

Regular health camps are organized in urban and rural pockets, offering:

  • ರಕ್ತದ ಒತ್ತಡ ಪರೀಕ್ಷೆ
  • ಶುಗರ್ ಪರೀಕ್ಷೆ
  • ಕಣ್ಣು ತಪಾಸಣೆ
  • ಮಹಿಳಾ ಆರೋಗ್ಯ ತಪಾಸಣೆ
  • ಮಕ್ಕಳ ಆರೋಗ್ಯ ತಪಾಸಣೆ
  • ಹಿರಿಯ ನಾಗರಿಕರ ಆರೋಗ್ಯ ಪರೀಕ್ಷೆ
  • Blood Pressure tests
  • Blood Sugar screenings
  • Eye checkups
  • Women's health screening
  • Pediatric checks
  • Senior citizen physical checks

ಅತಿವೃಷ್ಟಿ, ಅನಾವೃಷ್ಟಿ, ಪ್ರವಾಹ ಅಥವಾ ಇತರೆ ತುರ್ತು ಪರಿಸ್ಥಿತಿಗಳ ಸಮಯದಲ್ಲಿ:

During floods, droughts, heavy rains, or other disaster situations, it provides:

  • ಉಚಿತ ಪ್ರಾಥಮಿಕ ಚಿಕಿತ್ಸೆ
  • ಆಂಬುಲೆನ್ಸ್ ಸೇವೆ ಸಂಪರ್ಕ
  • ತುರ್ತು ಔಷಧಿ ವಿತರಣೆ
  • ಗಾಯಗೊಂಡವರಿಗೆ ವೈದ್ಯಕೀಯ ನೆರವು
  • ತಾತ್ಕಾಲಿಕ ಆರೋಗ್ಯ ಕೇಂದ್ರಗಳು
  • Free first aid treatment
  • Quick ambulance dispatch links
  • Emergency distribution of medicines
  • Immediate medical care for the injured
  • Setting up of mobile/temporary clinics

ಪಡಿತರ ಚೀಟಿದಾರರಿಗೆ:

Available for cardholders:

  • ಕಡಿಮೆ ಪ್ರೀಮಿಯಂ ಆರೋಗ್ಯ ವಿಮೆ
  • ಆಸ್ಪತ್ರೆ ಚಿಕಿತ್ಸೆಗೆ ಹಣಕಾಸು ನೆರವು
  • ಸರ್ಕಾರಿ ಆರೋಗ್ಯ ಯೋಜನೆಗಳ ಸಂಪರ್ಕ
  • ಆಯುಷ್ಮಾನ್ ಭಾರತ್ / ಆರೋಗ್ಯ ಕರ್ನಾಟಕ ಯೋಜನೆಗಳ ಮಾಹಿತಿ
  • Low-premium health insurance covers
  • Financial aid for inpatient hospital treatments
  • Direct links to state health welfare schemes
  • Integration with Ayushman Bharat/Arogya Karnataka

ವಿಶೇಷ ಸೇವೆಗಳು:

Specialized care includes:

  • ಗರ್ಭಿಣಿ ಮಹಿಳೆಯರ ಆರೋಗ್ಯ ತಪಾಸಣೆ
  • ಪೌಷ್ಠಿಕ ಆಹಾರ ಮಾರ್ಗದರ್ಶನ
  • ಮಕ್ಕಳ ಲಸಿಕೆ ಮಾಹಿತಿ
  • ಶಿಶು ಆರೋಗ್ಯ ಸಲಹೆ
  • ಅನಿಮಿಯಾ ಪರೀಕ್ಷೆ
  • Regular prenatal checks for pregnant women
  • Nutrition guidelines and supplement info
  • Child immunization tracking
  • Infant care and pediatric consultations
  • Anemia checks and tracking

ಡಿಜಿಟಲ್ ವ್ಯವಸ್ಥೆಯ ಮೂಲಕ:

Via the digital platform, beneficiaries access:

  • ಮೊಬೈಲ್ ಮೂಲಕ ವೈದ್ಯರ ಸಲಹೆ
  • Online Consultation
  • ದೂರದ ಗ್ರಾಮಗಳಿಗೆ ವೈದ್ಯಕೀಯ ಸಂಪರ್ಕ
  • Video Call ಮೂಲಕ ಚಿಕಿತ್ಸೆ ಮಾರ್ಗದರ್ಶನ
  • Doctor consultations over mobile phones
  • Online clinical consultations
  • Access to specialists for remote village patients
  • Treatment guidance via Video Call

ಇತ್ತೀಚಿನ ಪರಿಸ್ಥಿತಿಯಲ್ಲಿ ಮಾನಸಿಕ ಆರೋಗ್ಯವೂ ಮುಖ್ಯವಾಗಿದೆ. ಯೋಜನೆಯಡಿ:

Promoting mental well-being:

  • ಉಚಿತ ಕೌನ್ಸೆಲಿಂಗ್
  • ಒತ್ತಡ ನಿವಾರಣೆ ಸಲಹೆ
  • ವಿಪತ್ತು ಪೀಡಿತರಿಗೆ ಮಾನಸಿಕ ಬೆಂಬಲ
  • ಯುವಕರಿಗೆ ಮನೋವೈದ್ಯಕೀಯ ಮಾರ್ಗದರ್ಶನ
  • Free counseling sessions
  • Stress management advice
  • Mental health support for disaster victims
  • Psychiatric guidance for youth

ವಿಶೇಷ ಸೇವೆಗಳು:

Care for seniors:

  • ಉಚಿತ ಆರೋಗ್ಯ ತಪಾಸಣೆ
  • ಮನೆಮಟ್ಟದಲ್ಲಿ ಆರೋಗ್ಯ ಸೇವೆ
  • ಔಷಧಿ ಮಾರ್ಗದರ್ಶನ
  • ವೃದ್ಧರಿಗೆ ವೈದ್ಯಕೀಯ ಸಹಾಯವಾಣಿ
  • Free health checkups
  • Home-level health service links
  • Medication compliance guidance
  • Emergency health helpline for the elderly

ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ:

For economically weaker sections:

  • ಕಡಿಮೆ ದರದ ಔಷಧಿ
  • ಉಚಿತ ಪ್ರಾಥಮಿಕ ಔಷಧಿ ಕಿಟ್
  • ಆರೋಗ್ಯ ಉಪಕರಣ ಸಹಾಯ
  • ಮಾಸಿಕ ಆರೋಗ್ಯ ಸಹಾಯ ಯೋಜನೆ
  • Subsidized or low-cost medicines
  • Free primary medicine kits
  • Financial aid for medical equipment
  • Monthly health assistance scheme

ಜನಜಾಗೃತಿ ಕಾರ್ಯಕ್ರಮಗಳು:

Public awareness sessions cover:

  • ಡೆಂಗ್ಯೂ / ವೈರಲ್ ಜ್ವರ ಜಾಗೃತಿ
  • ಸ್ವಚ್ಛತೆ ಮತ್ತು ಆರೋಗ್ಯ ಶಿಕ್ಷಣ
  • ಪೌಷ್ಠಿಕ ಆಹಾರ ಅರಿವು
  • ಮಹಿಳಾ ಆರೋಗ್ಯ ಜಾಗೃತಿ
  • Dengue/viral fever prevention
  • Hygiene and public health education
  • Nutritional awareness and diet advice
  • Women's personal hygiene and health

QR Code ಮೂಲಕ:

Using the QR Code, it tracks:

  • ಆರೋಗ್ಯ ಸೇವೆ ಪಡೆದ ವಿವರ
  • ವೈದ್ಯಕೀಯ ನೆರವು ದಾಖಲೆ
  • ಆರೋಗ್ಯ ಶಿಬಿರ ಪಾಲ್ಗೊಂಡ ಮಾಹಿತಿ
  • ತುರ್ತು ನೆರವು ಇತಿಹಾಸ
  • ಇವುಗಳನ್ನು ಸುರಕ್ಷಿತವಾಗಿ ನಿರ್ವಹಿಸಬಹುದು.
  • Details of medical services received
  • Logs of financial medical assistance
  • Participation history in health camps
  • Record of emergency medical response
  • All managed securely inside the system.

ಯೋಜನೆಯಿಂದಾಗುವ ಆರೋಗ್ಯ ಕ್ಷೇತ್ರದ ಪ್ರಯೋಜನಗಳು Benefits in the Health Sector

  • ಗ್ರಾಮೀಣ ಜನರಿಗೆ ಸುಲಭ ಆರೋಗ್ಯ ಸೇವೆ
  • ತುರ್ತು ಪರಿಸ್ಥಿತಿಯಲ್ಲಿ ವೇಗವಾದ ಚಿಕಿತ್ಸೆ
  • ಆರೋಗ್ಯ ವೆಚ್ಚದ ಭಾರ ಕಡಿತ
  • ಡಿಜಿಟಲ್ ಆರೋಗ್ಯ ವ್ಯವಸ್ಥೆ ಬಲಪಡಿಸುವುದು
  • ಮಹಿಳೆ ಮತ್ತು ಮಕ್ಕಳ ಆರೋಗ್ಯ ಸುಧಾರಣೆ
  • ಸಮಾಜದ ಆರೋಗ್ಯ ಮಟ್ಟದಲ್ಲಿ ಸುಧಾರಣೆ
  • Easy healthcare access for rural citizens
  • Faster treatments during medical emergencies
  • Reduction in out-of-pocket health expenditure
  • Strengthening of digital health records
  • Improved health metrics for women and children
  • Overall upliftment of public health levels

ತಪಶೀಲು ಯೋಜನೆಯಡಿ ಪಡಿತರ ಚೀಟಿದಾರರಿಗೆ ಹಣಕಾಸು ಸಂಸ್ಥೆಗಳ ಸಹಕಾರದೊಂದಿಗೆ ಸಾಲ ಆಧಾರಿತ ಆರ್ಥಿಕ ನೆರವನ್ನು ಒದಗಿಸಲಾಗುತ್ತದೆ. ಈ ವ್ಯವಸ್ಥೆಯ ಮೂಲಕ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ತಮ್ಮ ಅಗತ್ಯಗಳನ್ನು ಪೂರೈಸಲು ಮತ್ತು ಸ್ವಾವಲಂಬಿ ಜೀವನವನ್ನು ನಡೆಸಲು ಅವಕಾಶ ಕಲ್ಪಿಸಲಾಗುತ್ತದೆ. ಯೋಜನೆಯಡಿ ನೀಡುವ ಸಾಲ ಸೌಲಭ್ಯಗಳು ಮತ್ತು ಅವುಗಳ ಪ್ರಯೋಜನಗಳು ಕೆಳಕಂಡಂತಿವೆ:

Under the Tapashilu Scheme, credit-based financial assistance is provided in collaboration with financial institutions. This allows backward families to meet their requirements and lead self-sufficient lives. The benefits of the loans are:

1
ಆರ್ಥಿಕ ಸ್ವಾವಲಂಬನೆ Financial Independence

ತಪಶೀಲು ಯೋಜನೆಯಡಿ ಪಡಿತರ ಚೀಟಿದಾರರಿಗೆ ಅಗತ್ಯವಿರುವ ಹಣಕಾಸು ನೆರವನ್ನು ಸಾಲ ರೂಪದಲ್ಲಿ ವಿವಿಧ ನೊಂದಾಯಿತ ಹಣಕಾಸು ಸಂಸ್ಥೆಗಳ ಮೂಲಕ ಒದಗಿಸಲಾಗುತ್ತದೆ. ಫಲಾನುಭವಿಗಳು ತಮ್ಮ ಅಗತ್ಯಕ್ಕೆ ಅನುಗುಣವಾಗಿ ಅರ್ಜಿ ಸಲ್ಲಿಸಿ ಹಣಕಾಸು ನೆರವನ್ನು ಪಡೆಯಬಹುದು. ಈ ಸಾಲವನ್ನು ನಿಗದಿತ ಅವಧಿಯಲ್ಲಿ ಕಂತುಗಳ ಮೂಲಕ ಹಿಂತಿರುಗಿಸುವ ವ್ಯವಸ್ಥೆ ಇವಾಗಿರುತ್ತದೆ. ಇದರಿಂದ ಫಲಾನುಭವಿಗಳು ಸಂಪೂರ್ಣ ಸಹಾಯಧನದ ಮೇಲೆ ಅವಲಂಬಿತರಾಗದೇ ತಮ್ಮ ಆರ್ಥಿಕ ಸ್ಥಿತಿಯನ್ನು ಸ್ವತಃ ಸುಧಾರಿಸಿಕೊಳ್ಳುವ ಅವಕಾಶ ಪಡೆಯುತ್ತಾರೆ ಮತ್ತು ಕ್ರಮೇಣ ಆತ್ಮನಿರ್ಭರತೆಯತ್ತ ಸಾಗುತ್ತಾರೆ.

Financial aid is provided as loans via registered financial institutions. Beneficiaries apply based on their needs, and repay through installments. This ensures they don't depend entirely on subsidies, helping them self-improve their financial condition towards self-reliance.

2
ಉದ್ಯಮಾರಂಭಕ್ಕೆ ಬೆಂಬಲ Support for Starting Businesses

ಈ ಯೋಜನೆ ಮೂಲಕ ಪಡಿತರ ಚೀಟಿದಾರರು ಸಣ್ಣ ವ್ಯಾಪಾರ, ಗೃಹೋದ್ಯಮ, ಕೃಷಿ ಆಧಾರಿತ ಚಟುವಟಿಕೆಗಳು ಅಥವಾ ಸ್ವಯಂ ಉದ್ಯೋಗ ಆರಂಭಿಸಲು ಅಗತ್ಯವಿರುವ ಆರಂಭಿಕ ಬಂಡವಾಳವನ್ನು ಸಾಲ ರೂಪದಲ್ಲಿ ಪಡೆಯಬಹುದು. ಉದಾಹರಣೆಗೆ ಸಣ್ಣ ಅಂಗಡಿ ಆರಂಭಿಸುವುದು, ಕೈಗಾರಿಕಾ ಕಾರ್ಯಗಳು, ಗೃಹೋದ್ಯಮ ಅಥವಾ ಸೇವಾ ಆಧಾರಿತ ಉದ್ಯಮಗಳನ್ನು ಆರಂಭಿಸಲು ಈ ಹಣಕಾಸು ನೆರವು ಉಪಯೋಗವಾಗುತ್ತದೆ. ಇದರಿಂದ ಉದ್ಯೋಗಾವಕಾಶಗಳು ಹೆಚ್ಚಾಗಿ ಕುಟುಂಬದ ಆದಾಯವೂ ವೃದ್ಧಿಯಾಗುತ್ತದೆ.

Cardholders can obtain start-up capital for small trades, home industries, farm-allied tasks, or self-employment. Setting up retail shops, cottage industries, or service ventures helps create employment and raises household incomes.

3
ಅವಶ್ಯಕ ವೆಚ್ಚಗಳಿಗೆ ನೆರವು Coverage of Emergency Expenditures

ಅನೇಖ ಸಂದರ್ಭಗಳಲ್ಲಿ ಪಡಿತರ ಚೀಟಿದಾರರು ತುರ್ತು ವೆಚ್ಚಗಳನ್ನು ಎದುರಿಸುತ್ತಾರೆ, ಉದಾಹರಣೆಗೆ ವೈದ್ಯಕೀಯ ಚಿಕಿತ್ಸೆ, ಮಕ್ಕಳ ಶಿಕ್ಷಣ, ಮನೆಗೆ ಅಗತ್ಯವಾದ ವಸ್ತುಗಳ ಖರೀದಿ ಇತ್ಯಾದಿ. ಈ ಯೋಜನೆಯಡಿ ನೀಡುವ ಸಾಲ ಸೌಲಭ್ಯವನ್ನು ಇಂತಹ ಅಗತ್ಯ ವೆಚ್ಚಗಳನ್ನು ಪೂರೈಸಲು ಬಳಸಿಕೊಳ್ಳಬಹುದು. ಇದರಿಂದ कुटुंबಗಳು ತುರ್ತು ಪರಿಸ್ಥಿತಿಗಳಲ್ಲಿ ಆರ್ಥಿಕ ಸಂಕಷ್ಟಕ್ಕೆ ಒಳಗಾಗದೆ ತಮ್ಮ ಅಗತ್ಯಗಳನ್ನು ಪೂರೈಸಿಕೊಳ್ಳಲು ಸಾಧ್ಯವಾಗುತ್ತದೆ.

Cardholders often face critical costs like medical expenses, kids' education, or purchase of domestic essentials. Loan facilities support these needs, keeping families secure from sudden financial distress.

4
ಬ್ಯಾಂಕಿಂಗ್ ಮತ್ತು ಹಣಕಾಸು ವ್ಯವಸ್ಥೆಯೊಂದಿಗೆ ಸಂಪರ್ಕ Integration with Formal Banking Systems

ತಪಶೀಲು ಯೋಜನೆಯಡಿ ಹಣಕಾಸು ನೆರವನ್ನು ಬ್ಯಾಂಕ್ ಮತ್ತು ಮಾನ್ಯತೆ ಪಡೆದ ಹಣಕಾಸು ಸಂಸ್ಥೆಗಳ ಮೂಲಕ ಒದಗಿಸಲಾಗುತ್ತದೆ. ಇದರ ಮೂಲಕ ಪಡಿತರ ಚೀಟಿದಾರರು ಬ್ಯಾಂಕಿಂಗ್ ವ್ಯವಸ್ಥೆಯೊಂದಿಗೆ ಸಂಪರ್ಕ ಹೊಂದುತ್ತಾರೆ. ಈ ಪ್ರಕ್ರಿಯೆಯ ಮೂಲಕ ಅವರು ಬ್ಯಾಂಕ್ ಖಾತೆ ಬಳಕೆ, ಉಳಿತಾಯ, ಹಣಕಾಸು ಶಿಸ್ತು ಮತ್ತು ಸಾಲ ನಿರ್ವಹಣೆ ಕುರಿತು ಅರಿವು ಪಡೆಯುತ್ತಾರೆ. ಇದರಿಂದ ಅವರ ಹಣಕಾಸು ಜ್ಞಾನವೂ ವೃದ್ಧಿಯಾಗುತ್ತದೆ.

Financial aid is channelled through recognized banks and financial institutions. This integrates cardholders with banking systems, encouraging savings habits, transaction familiarity, and financial literacy.

5
ಕಡಿಮೆ ಬಡ್ಡಿದರದ ಸಾಲ ಸೌಲಭ್ಯ Low Interest Rates

ಸಾಮಾನ್ಯವಾಗಿ ಖಾಸಗಿ ಸಾಲ ವ್ಯವಸ್ಥೆಗಳಲ್ಲಿ ಹೆಚ್ಚಿನ ಬಡ್ಡಿದರ ವಿಧಿಸಲಾಗುತ್ತದೆ. ಆದರೆ ತಪಶೀಲು ಯೋಜನೆಯಡಿ ಹಣಕಾಸು ಸಂಸ್ಥೆಗಳ ಸಹಕಾರದೊಂದಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ಒದಗಿಸಲಾಗುತ್ತದೆ. ಇದರಿಂದ ಆರ್ಥಿಕವಾಗಿ ದುರ್ಬಲ ವರ್ಗದ ಪಡಿತರ ಚೀಟಿದಾರರು ಸುಲಭವಾಗಿ ಸಾಲ ಪಡೆದು ತಮ್ಮ ಅಗತ್ಯಗಳನ್ನು ಪೂರೈಸಿಕೊಳ್ಳಲು ಸಾಧ್ಯವಾಗುತ್ತದೆ ಮತ್ತು ಸಾಲದ ಭಾರ ಕಡಿಮೆಯಾಗುತ್ತದೆ.

Unlike high-interest informal loans, the scheme works with institutions to secure minimal interest rates. This protects vulnerable families from debt traps while fulfilling their financial requirements.

6
ಭವಿಷ್ಯದಲ್ಲಿ ಹೆಚ್ಚಿನ ನೆರವು ಪಡೆಯುವ ಅವಕಾಶ Enhanced Credit Opportunities

ಫಲಾನುಭವಿಗಳು ಪಡೆದ ಸಾಲವನ್ನು ನಿಯಮಿತವಾಗಿ ಕಂತುಗಳ ಮೂಲಕ ತಿರುಗಿಸಿ ಪಾವತಿಸಿದರೆ ಅವರ ವಿಶ್ವಾಸಾರ್ಹತೆ ಹೆಚ್ಚುತ್ತದೆ. ಇದರ ಪರಿಣಾಮವಾಗಿ ಅವರು ಮುಂದಿನ ದಿನಗಳಲ್ಲಿ ಹೆಚ್ಚಿನ ಮೊತ್ತದ ಸಾಲ ಅಥವಾ ಇತರೆ ಆರ್ಥಿಕ ನೆರವು ಪಡೆಯಲು ಅರ್ಹರಾಗುತ್ತಾರೆ. ಈ ವ್ಯವಸ್ಥೆ ಅವರ ಆರ್ಥಿಕ ಬೆಳವಣಿಗೆಗೆ ದೀರ್ಘಕಾಲಿಕ ಅವಕಾಶವನ್ನು ಒದಗಿಸುತ್ತದೆ.

Regular and timely repayment builds creditworthiness. Consequently, beneficiaries become eligible for larger loans or additional support in the future, fostering long-term economic growth.

7
ಮಹಿಳಾ ಸಬಲೀಕರಣ Women Empowerment

ತಪಶೀಲು ಯೋಜನೆಯಡಿ ಮಹಿಳಾ ಪಡಿತರ ಚೀಟಿದಾರರಿಗೆ ಗೃಹೋದ್ಯಮ, ಸ್ವಯಂ ಉದ್ಯೋಗ ಮತ್ತು ಸಣ್ಣ ವ್ಯಾಪಾರ ಆರಂಭಿಸಲು ವಿಶೇಷ ಸಾಲ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ಇದರಿಂದ ಮಹಿಳೆಯರು ತಮ್ಮ ಕುಟುಂಬದ ಆರ್ಥಿಕ ನಿರ್ವಹಣೆಯಲ್ಲಿ ಸಕ್ರಿಯವಾಗಿ ಭಾಗವಹಿಸಲು ಸಾಧ್ಯವಾಗುತ್ತದೆ. ಮಹಿಳೆಯರ ಆರ್ಥಿಕ ಸ್ವಾವಲಂಬನೆ ಹೆಚ್ಚುವುದರಿಂದ ಕುಟುಂಬದ ಹಾಗೂ ಸಮಾಜದ ಅಭಿವೃದ್ಧಿಗೂ ಸಹಕಾರಿಯಾಗುತ್ತದೆ.

Special loan terms are reserved for women cardholders starting home-based or micro businesses. This increases women's economic participation in families, driving overall social progress.

ತಪಶೀಲು ಯೋಜನೆಯ ಅನುಷ್ಠಾನದ ಮೂಲಕ ಸಮಾಜದ ದುರ್ಬಲ ವರ್ಗಗಳ ಜೀವನಮಟ್ಟದಲ್ಲಿ ಸುಧಾರಣೆ ತರಲು ಮತ್ತು ಸರ್ಕಾರಿ ಸೇವೆಗಳ ಪರಿಣಾಮಕಾರಿತ್ವವನ್ನು ಹೆಚ್ಚಿಸಲು ಕೆಳಕಂಡ ಪ್ರಮುಖ ಫಲಿತಾಂಶಗಳನ್ನು ನಿರೀಕ್ಷಿಸಲಾಗುತ್ತದೆ.

Through the implementation of the Tapashilu Scheme, the following key outcomes are expected to improve the lives of weaker sections and boost administration efficiency:

  • 1
    ಡಿಜಿಟಲ್ ಗುರುತಿನ ವ್ಯವಸ್ಥೆಯ ಮೂಲಕ ಸುಲಭ ಅರ್ಜಿ ಸಲ್ಲಿಸುವಿಕೆ: Simple Application via Digital Identity:

    ಪಡಿತರ ಚೀಟಿದಾರರಿಗೆ ಕ್ಯೂಆರ್ ಕೋಡ್ ಆಧಾರಿತ ಡಿಜಿಟಲ್ ಗುರುತಿನ ಕಾರ್ಡ್ ನೀಡುವುದರಿಂದ ವಿವಿಧ ಸರ್ಕಾರಿ ಯೋಜನೆಗಳು ಮತ್ತು ಸೇವೆಗಳನ್ನು ಸುಲಭವಾಗಿ, ವೇಗವಾಗಿ ಹಾಗೂ ಪಾರದರ್ಶಕವಾಗಿ ಪಡೆಯುವ ಅವಕಾಶ ದೊರೆಯುತ್ತದೆ.

    Providing QR-code-based digital cards enables cardholders to access government benefits simply, transparently, and with minimal delays.

  • 2
    ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಜೀವನಮಟ್ಟ ಸುಧಾರಣೆ: Standard of Living Upliftment:

    ಹಣಕಾಸು ಸಂಸ್ಥೆಗಳ ಸಹಕಾರದೊಂದಿಗೆ ನೀಡುವ ಸಾಲ ಮತ್ತು ಆರ್ಥಿಕ ನೆರವುಗಳ ಮೂಲಕ ಪಡಿತರ ಚೀಟಿದಾರರು ತಮ್ಮ ಮೂಲಭೂತ ಅಗತ್ಯಗಳನ್ನು ಪೂರೈಸಿಕೊಳ್ಳಲು ಮತ್ತು ತಮ್ಮ ಆರ್ಥಿಕ ಸ್ಥಿತಿಯನ್ನು ಸುಧಾರಿಸಿಕೊಳ್ಳಲು ಸಾಧ್ಯವಾಗುತ್ತದೆ.

    Subsidized credit facilities allow cardholders to comfortably meet household requirements and improve their financial status.

  • 3
    ಸ್ವಯಂ ಉದ್ಯೋಗ ಮತ್ತು ಸಣ್ಣ ಉದ್ಯಮಗಳ ಅಭಿವೃದ್ಧಿ: Growth of Self-Employment:

    ಯೋಜನೆಯಡಿ ಒದಗಿಸುವ ಹಣಕಾಸು ಬೆಂಬಲದ ಮೂಲಕ ಫಲಾನುಭವಿಗಳು ಸಣ್ಣ ವ್ಯಾಪಾರ, ಗೃಹೋದ್ಯಮ ಮತ್ತು ಸ್ವಯಂ ಉದ್ಯೋಗಗಳನ್ನು ಆರಂಭಿಸಲು ಅವಕಾಶ ಪಡೆಯುತ್ತಾರೆ. ಇದರಿಂದ ಕುಟುಂಬಗಳ ಆದಾಯ ಹೆಚ್ಚಾಗಿ ಆರ್ಥಿಕ ಸ್ಥಿರತೆ ವೃದ್ಧಿಯಾಗುತ್ತದೆ.

    Easy availability of credit promotes small enterprises, home industries, and self-employment, boosting families' steady incomes.

  • 4
    ಪ್ರಕೃತಿ ವಿಕೋಪಗಳ ಸಂದರ್ಭದಲ್ಲಿ ತ್ವರಿತ ನೆರವು: Rapid Relief in Natural Calamities:

    ಅತಿವೃಷ್ಟಿ, ಅನಾವೃಷ್ಟಿ ಹಾಗೂ ಇತರೆ ಪ್ರಕೃತಿ ವಿಕೋಪಗಳ ಸಂದರ್ಭಗಳಲ್ಲಿ ಪಡಿತರ ಚೀಟಿದಾರರ ವಿವರಗಳು ಡಿಜಿಟಲ್ ವ್ಯವಸ್ಥೆಯಲ್ಲಿ ಲಭ್ಯವಿರುವುದರಿಂದ ಅವರಿಗೆ ಅಗತ್ಯವಿರುವ ನೆರವು ಮತ್ತು ಮೂಲಭೂತ ಸೌಲಭ್ಯಗಳನ್ನು ವೇಗವಾಗಿ ಮತ್ತು ಪರಿಣಾಮಕಾರಿಯಾಗಿ ತಲುಪಿಸಲು ಸಾಧ್ಯವಾಗುತ್ತದೆ.

    Since database details are kept digitally, identifying and routing relief supplies to vulnerable families during floods or droughts becomes rapid and clean.

  • 5
    ಪಾರದರ್ಶಕ ಮತ್ತು ಪರಿಣಾಮಕಾರಿ ಆಡಳಿತ ವ್ಯವಸ್ಥೆ: Transparent and Efficient Governance:

    ಡಿಜಿಟಲ್ ತಂತ್ರಜ್ಞಾನ ಬಳಕೆಯಿಂದ ಯೋಜನೆಯ ಎಲ್ಲಾ ಪ್ರಕ್ರಿಯೆಗಳು ಪಾರದರ್ಶಕವಾಗಿ ನಡೆಯುತ್ತವೆ. ಇದರಿಂದ ಸೇವೆಗಳ ವಿತರಣೆ ವೇಗವಾಗಿ ನಡೆಯುವುದರ ಜೊತೆಗೆ ಆಡಳಿತ ವ್ಯವಸ್ಥೆಯ ಕಾರ್ಯಕ್ಷಮತೆ ಹೆಚ್ಚುತ್ತದೆ ಮತ್ತು ಜನರಿಗೆ ಸರ್ಕಾರದ ಮೇಲಿನ ನಂಬಿಕೆ ಬಲವಾಗುತ್ತದೆ.

    Adopting digital verification eliminates leakages. Service deliveries speed up, boosting institutional transparency and strengthening public trust in administration.

ಯೋಜನೆ ವಿಶೇಷತೆಗಳು Scheme Features

ತಪಶೀಲು ಯೋಜನೆ – ವಿಶೇಷತೆಗಳು Tapashilu Scheme - Key Features

  • ಡಿಜಿಟಲ್ ಗುರುತಿನ ವ್ಯವಸ್ಥೆ Digital Identity System

    ತಪಶೀಲು ಯೋಜನೆಯಡಿ ಪಡಿತರ ಚೀಟಿದಾರರಿಗೆ ಕ್ಯೂಆರ್ ಕೋಡ್ ಆಧಾರಿತ ಡಿಜಿಟಲ್ ಗುರುತಿನ ಕಾರ್ಡ್ ನೀಡಲಾಗುತ್ತದೆ. ಇದರಿಂದ ಫಲಾನುಭವಿಯ ಮಾಹಿತಿಯನ್ನು ಡಿಜಿಟಲ್ ರೂಪದಲ್ಲಿ ಸುರಕ್ಷಿತವಾಗಿ ಸಂಗ್ರಹಿಸಿ ಅಗತ್ಯವಿರುವಾಗ ತಕ್ಷಣ ಪರಿಶೀಲಿಸಲು ಸಾಧ್ಯವಾಗುತ್ತದೆ.

    A QR-code-based card secures beneficiary details digitally, allowing instant verification by departments when needed.

  • ಅನೇಕ ಸೇವೆಗಳು ಒಂದೇ ಕಾರ್ಡ್ನಲ್ಲಿ Multiple Services, One Card

    ಈ ಕಾರ್ಡ್ ಕೇವಲ ಗುರುತಿನ ಕಾರ್ಡ್ ಮಾತ್ರವಲ್ಲ, ವಿವಿಧ ಸರ್ಕಾರಿ ಸೇವೆಗಳು ಮತ್ತು ಸೌಲಭ್ಯಗಳನ್ನು ಪಡೆಯಲು ಉಪಯೋಗವಾಗುವ ಸಮಗ್ರ ಡಿಜಿಟಲ್ ಗುರುತಿನ ವ್ಯವಸ್ಥೆಯಾಗಿದೆ.

    This card acts as a single gateway to access multiple welfare schemes and benefits, replacing several cards.

  • ಬಹು ಇಲಾಖೆಗಳ ಸಂಯೋಜನೆ Multi-Department Integration

    ಕೃಷಿ ಇಲಾಖೆ, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸೇವೆಗಳನ್ನು ಒಂದೇ ವ್ಯವಸ್ಥೆಯಲ್ಲಿ ಸಂಪರ್ಕಿಸುವ ಉದ್ದೇಶ ಈ ಯೋಜನೆಯಲ್ಲಿದೆ.

    It connects services across agricultural, educational, and welfare departments into a unified citizen record system.

  • ಪಡಿತರ ಕುಟುಂಬದ ಸಂಪೂರ್ಣ ಮಾಹಿತಿ Full Family Profiling

    ಕಾರ್ಡ್ನಲ್ಲಿ ಪಡಿತರ ಚೀಟಿಯಲ್ಲಿ ಇರುವ ಕುಟುಂಬ ಸದಸ್ಯರ ಹೆಸರುಗಳನ್ನು ಸೇರಿಸುವ ಮೂಲಕ ಕುಟುಂಬದ ಸಂಪೂರ್ಣ ವಿವರಗಳನ್ನು ಒಂದೇ ಕಾರ್ಡ್ನಲ್ಲಿ ದಾಖಲಿಸುವ ವ್ಯವಸ್ಥೆ ಇರುತ್ತದೆ.

    By listing all members named in the ration card, the digital profile keeps a complete family profile in one record.

  • ತುರ್ತು ಪರಿಸ್ಥಿತಿಯಲ್ಲಿ ವೇಗವಾದ ನೆರವು Swift Emergency Responses

    ಅತಿವೃಷ್ಟಿ, ಅನಾವೃಷ್ಟಿ ಅಥವಾ ಇತರೆ ಪ್ರಕೃತಿ ವಿಕೋಪಗಳ ಸಂದರ್ಭದಲ್ಲಿ ಫಲಾನುಭವಿಗಳನ್ನು ತ್ವರಿತವಾಗಿ ಗುರುತಿಸಿ ಅವರಿಗೆ ಅಗತ್ಯ ನೆರವು ಒದಗಿಸಲು ಈ ಡಿಜಿಟಲ್ ವ್ಯವಸ್ಥೆ ಸಹಕಾರಿಯಾಗುತ್ತದೆ.

    During natural disasters like floods, card profiling enables swift identification and routing of essential relief aid.

  • ಡಿಜಿಟಲ್ ತಂತ್ರಜ್ಞಾನ ಬಳಕೆ Modern Tech Stack

    ಕ್ಯೂಆರ್ ಕೋಡ್, ಡಿಜಿಟಲ್ ಡೇಟಾಬೇಸ್ ಮತ್ತು ವೆಬ್ ಪೋರ್ಟಲ್ ವ್ಯವಸ್ಥೆಯ ಮೂಲಕ ಫಲಾನುಭವಿಗಳು ಸೇವೆಗಳನ್ನು ಸುಲಭವಾಗಿ ಪಡೆಯಲು ಸಾಧ್ಯವಾಗುತ್ತದೆ.

    Beneficiaries leverage modern tech options (QR codes, databases, web portal) to request services without friction.

  • ಪಾರದರ್ಶಕತೆ ಮತ್ತು ಸುಲಭ ಆಡಳಿತ Transparency and Governance

    ಡಿಜಿಟಲ್ ವ್ಯವಸ್ಥೆಯಿಂದ ಸೇವೆಗಳ ವಿತರಣೆ ಪಾರದರ್ಶಕವಾಗಿ ನಡೆಯುವುದರ ಜೊತೆಗೆ ಆಡಳಿತ ವ್ಯವಸ್ಥೆಯಲ್ಲಿ ಕಾರ್ಯಕ್ಷಮತೆ ಹೆಚ್ಚಾಗುತ್ತದೆ.

    Digital tracking reduces leakages, ensuring transparent distributions while lowering administrative bottlenecks.

  • ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಸೇವೆಗಳು Cost-Effective Access

    ಈ ಯೋಜನೆಯಡಿ ಪಡಿತರ ಚೀಟಿದಾರರು ಕಡಿಮೆ ವೆಚ್ಚದಲ್ಲಿ ಡಿಜಿಟಲ್ ಗುರುತಿನ ಕಾರ್ಡ್ ಪಡೆದು ವಿವಿಧ ಸೇವೆಗಳು ಮತ್ತು ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುತ್ತದೆ.

    Families pay minimal costs to obtain the digital card, gaining lifetime access to multiple subsidized utilities.

ತಪಶೀಲು ಯೋಜನೆಯಿಂದ ಸಮಾಜಕ್ಕೆ ಮತ್ತು ಸರ್ಕಾರಕ್ಕೆ ನೀಡುವ ಪ್ರಯೋಜನಗಳು Societal and Governmental Benefits

  • ಸಮಾಜದ ದುರ್ಬಲ ವರ್ಗಗಳಿಗೆ ನೆರವು Aid to Weaker Sections

    ಈ ಯೋಜನೆಯ ಮೂಲಕ ಬಿ.ಪಿ.ಎಲ್ ಮತ್ತು ಅಂತ್ಯೋದಯ ಪಡಿತರ ಚೀಟಿದಾರರಿಗೆ ಡಿಜಿಟಲ್ ಗುರುತಿನ ವ್ಯವಸ್ಥೆ ಒದಗಿಸಲಾಗುತ್ತದೆ. ಇದರಿಂದ ಅವರಿಗೆ ಸರ್ಕಾರಿ ಸೇವೆಗಳು ಮತ್ತು ಸೌಲಭ್ಯಗಳನ್ನು ಸುಲಭವಾಗಿ ಪಡೆಯಲು ಸಾಧ್ಯವಾಗುತ್ತದೆ.

    BPL and Antyodaya cardholders receive priority digital cards, helping weaker families secure government services easily.

  • ಆರ್ಥಿಕ ಸಬಲೀಕರಣ Economic Empowerment

    ಹಣಕಾಸು ಸಂಸ್ಥೆಗಳ ಸಹಕಾರದ ಮೂಲಕ ಪಡಿತರ ಚೀಟಿದಾರರಿಗೆ ಸಾಲ ಆಧಾರಿತ ಹಣಕಾಸು ನೆರವು ದೊರೆಯುವುದರಿಂದ ಸ್ವಯಂ ಉದ್ಯೋಗ ಮತ್ತು ಸಣ್ಣ ಉದ್ಯಮಗಳನ್ನು ಪ್ರಾರಂಭಿಸಲು ಅವಕಾಶ ಸಿಗುತ್ತದೆ.

    Collaborations with banks help secure credit lines, allowing cardholders to start small home trades or cottage businesses.

  • ಸರ್ಕಾರಿ ಸೇವೆಗಳ ಸುಲಭ ಲಭ್ಯತೆ Smooth Service Delivery

    ಡಿಜಿಟಲ್ ಗುರುತಿನ ಕಾರ್ಡ್ ಮೂಲಕ ಫಲಾನುಭವಿಗಳು ವಿವಿಧ ಸರ್ಕಾರಿ ಯೋಜನೆಗಳು ಮತ್ತು ಸೌಲಭ್ಯಗಳನ್ನು ವೇಗವಾಗಿ ಮತ್ತು ಸುಲಭವಾಗಿ ಪಡೆಯಲು ಸಾಧ್ಯವಾಗುತ್ತದೆ.

    A digitized database speeds up the processing of claims, ensuring citizens get welfare assistance with minimal delays.

  • ಪ್ರಕೃತಿ ವಿಕೋಪಗಳ ಸಮಯದಲ್ಲಿ ಸಹಾಯ Disaster Relief Logistics

    ಅತಿವೃಷ್ಟಿ, ಅನಾವೃಷ್ಟಿ ಮತ್ತು ಇತರೆ ತುರ್ತು ಪರಿಸ್ಥಿತಿಗಳಲ್ಲಿ ಫಲಾನುಭವಿಗಳನ್ನು ತ್ವರಿತವಾಗಿ ಗುರುತಿಸಿ ಅವರಿಗೆ ಅಗತ್ಯ ನೆರವು ಮತ್ತು ಸೌಲಭ್ಯಗಳನ್ನು ಒದಗಿಸಲು ಈ ವ್ಯವಸ್ಥೆ ಸಹಕಾರಿಯಾಗುತ್ತದೆ.

    During droughts or heavy rains, relief teams identify vulnerable cardholders via digital logs to send swift aid.

  • ಡಿಜಿಟಲ್ ಆಡಳಿತ ವ್ಯವಸ್ಥೆ ಬಲಪಡಿಸುವುದು Strengthening Digital Administration

    ಈ ಯೋಜನೆಯ ಮೂಲಕ ಸರ್ಕಾರದ ವಿವಿಧ ಇಲಾಖೆಗಳ ಸೇವೆಗಳು ಡಿಜಿಟಲ್ ವ್ಯವಸ್ಥೆಯಲ್ಲಿ ಸಂಪರ್ಕವಾಗುವುದರಿಂದ ಆಡಳಿತ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ಕಾರ್ಯಕ್ಷಮತೆ ಹೆಚ್ಚಾಗುತ್ತದೆ.

    Linking various state wings with a unified database increases administrative efficiency while enforcing transparency.

  • ಡೇಟಾ ನಿರ್ವಹಣೆ ಸುಲಭ Unified Data Management

    ಕ್ಯೂಆರ್ ಕೋಡ್ ಮತ್ತು ಡಿಜಿಟಲ್ ಡೇಟಾಬೇಸ್ ವ್ಯವಸ್ಥೆಯ ಮೂಲಕ ಫಲಾನುಭವಿಗಳ ಮಾಹಿತಿಯನ್ನು ಸುಲಭವಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ.

    Ration card databases are managed digitally under standard schemas, simplifying tracking and auditing.

  • ಸಮಾಜದ ಸಮಗ್ರ ಅಭಿವೃದ್ಧಿ Overall Social Development

    ಈ ಯೋಜನೆಯ ಮೂಲಕ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ನೆರವು ದೊರೆಯುವುದರಿಂದ ಅವರ ಜೀವನಮಟ್ಟ ಸುಧಾರಿಸಿ ಸಮಾಜದ ಸಮಗ್ರ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ.

    Empowering the underprivileged with digital cards improves their lifestyle and contributes to the general growth of the state.

ಆನ್ ಲೈನ್ ಅರ್ಜಿ Online Application

  • ಎಲ್ಲಾ ಮಾದರಿಯ ಪಡಿತರ ಚೀಟಿದಾರರು ಅರ್ಹತೆ ಪಡೆದಿರುತ್ತಾರೆ All types of ration cardholders are eligible.
  • ಸೇವೆಗಳನ್ನು ಪಡೆಯಲು ಯಾವುದೇ ಕಾಲಮಿತಿ ಇರುವುದಿಲ್ಲ There is no time limit to avail of the services.
  • ಪಡಿತರ ಚೀಟಿಯಲ್ಲಿರುವ ಎಲ್ಲಾ ಸದಸ್ಯರು ಸೇವೆಗಳನ್ನು ಪಡೆಯಲು ಅರ್ಹರಾಗಿರುತ್ತಾರೆ All members listed in the ration card are eligible to avail of the services.
ಅರ್ಜಿ ಸಲ್ಲಿಸಿ Apply Online

ಸಂಪರ್ಕ ಮಾಹಿತಿ Contact Information

ನಿರ್ದೇಶಕರ ಕಚೇರಿ Director Office

ಹಂತ 5,ಗ್ರೀನ್ ಬೌಲೆವಾರ್ಡ್,
ನವದೆಹಲಿ, ನೋಯ್ಡಾ - 201301
Level 5,Green Boulevard,
New Delhi, Noida - 201301

ಇಮೇಲ್: tapashiiluyojaneadm@gmail.com Email: tapashiiluyojaneadm@gmail.com

ಕಾರ್ಯಾಲಯ Office

ತಪಶೀಲು ಯೋಜನೆ
(ವಿಟಲಿಟಿ ಡಿಜಿಟಲ್ ಟೆಕ್ ಪ್ರೈವೈಟ್ ಲಿಮಿಟೆಡ್, ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ)
KEONICS,ಮೊದಲನೇ ಮಹಡಿ, ಮಾಚೇನಹಳ್ಳಿ ಶಿವಮೊಗ್ಗ - 577222
Tapasheelu Yojane
(Vitality Digital Tech Private Limited, Karnataka State Electronics Development Corporation)
KEONICS,First Floor, Machenahalli, Shivamogga - 577222

ಇಮೇಲ್: tapashiiluyojaneadm@gmail.com Email: tapashiiluyojaneadm@gmail.com